Category: ಕನ್ನದ
ಕನ್ನದ
ವಕೀಲರ ಕುರಿತು ಮಹಾತ್ಮಾ ಗಾಂಧೀಜಿ!
ವಕೀಲರೂ ಮನುಷ್ಯರೇ ಅಲ್ಲವೇ! ಪ್ರತಿಯೊಬ್ಬ ಮನುಷ್ಯನಲ್ಲಿಯೂ ಏನಾದರೊಂದು ಒಳ್ಳೆಯದು ಇದ್ದೇ ಇರುತ್ತದೆ. ವಕೀಲರು ಒಳ್ಳೆಯದು ಮಾಡಿದ್ದಾರೆಂಬ ದೃಷ್ಟಾಂತಗಳೆಲ್ಲ ಅವರು ಮನುಷ್ಯರು ಎಂದು ಮಾಡಿದವು, ವಕೀಲರಾದುದರಿಂದ ಮಾಡಿದುದಲ್ಲ.
ಈ ವೃತ್ತಿಯು ದುರ್ನೀತಿಯನ್ನು ಕಲಿಸುತ್ತದೆ. ಇದರಲ್ಲಿ ಪ್ರಲೋಭನ ಹೆಚ್ಚು. ಇದಕ್ಕೆ ಬಲಿಯಾಗದವರು ಕಡಿಮೆ.
ಒಂದು ಕಡೆ ಹಿಂದೂಗಳೂ ಮುಸಲ್ಮಾನರೂ ಜಗಳವಾಡಿದರು. ಸಾಧಾರಣ ಮನುಷ್ಯ ಆದುದನ್ನೆಲ್ಲಾ ಮರೆತುಬಿಡಿ ಎನ್ನುತ್ತಾನೆ. ಎರಡೂ ಕಡೆ ಅಲ್ಪಸ್ವಲ್ಪ ತಪ್ಪಿದ್ದೇ ಇರುತ್ತದೆ. ಮುಂದೆ ಜಗಳವಾಡಬೇಡಿ ಎಂದು ಬುದ್ಧಿ ಹೇಳುತ್ತಾನೆ. ಆದರೆ, ಅವರು ವಕೀಲರ ಬಳಿಗೆ ಹೋಗುತ್ತಾರೆ. ಅವರು ಮಾಡುವುದೇನು? ತಮ್ಮ ಕಕ್ಷಿಗಾರನ ಪರವಾಗಿ ವಾದ. ಆ ಕಕ್ಷಿಗಾರನಿಗೇ ಗೊತ್ತಿಲ್ಲದ ಸಂಗತಿಗಳನ್ನೂ ಹುಡುಕಿ ತೆಗೆಯುವುದು. ಹಾಗೆ ಮಾಡದಿದ್ದರೆ ಅಂಥವರು ತಮ್ಮ ವೃತ್ತಿಗೇ ಕಳಂಕ, ಆದುದರಿಂದ ಸಾಧಾರಣವಾಗಿ ವಕೀಲರು ಜಗಳವನ್ನು ನಂದಿಸುವುದಿಲ್ಲ. ಮತ್ತಷ್ಟು ಉರಿಸುತ್ತಾರೆ.
ಇನ್ನೊಂದು – ಪರರ ದುಃಖ ನಿವಾರಣೆಗಾಗಿ ಯಾರೂ ವಕೀಲಿ ಮಾಡುವುದಿಲ್ಲ; ಹಣ ಗಳಿಸಲು ಮಾಡುತ್ತಾರೆ. ಐಶ್ವರ್ಯ ಸಂಪಾದನೆಗೆ ಇದೊಂದು ದಾರಿಯಾಗಿದೆ. ಜಗಳ ಹೆಚ್ಚಾದರೆ ಅವರಿಗೆ ಲಾಭ ಹೆಚ್ಚು. ಜಗಳ ಹೆಚ್ಚಾದರೆ ವಕೀಲರಿಗೆ ಸಂತೋಷ; ನಾನಿದನ್ನು ಸ್ವಂತವಾಗಿ ಬಲ್ಲೆ.
ಚಿಕ್ಕ-ಪುಟ್ಟ ವಕೀಲರು ಇಲ್ಲದ ಕಡೆ ಜಗಳ ಹುಟ್ಟಿಸುತ್ತಾರೆ. ಅವರ ದಲ್ಲಾಳಿಗಳು (ಫೂಟ್ ಲಾಯರ್) ಜಗಣೆಯಂತೆ ಬಡವರ ರಕ್ತವನ್ನು ಹೀರುತ್ತಾರೆ. ಆ ಕಸುಬೇ ಜಗಳ ಕಚ್ಚಾಟಗಳಿಗೆ ಪ್ರೋತ್ಸಾಹ ಕೊಡುವಂತಹುದು. ವಕೀಲರಿಗೆ ಹೆಚ್ಚು ಕೆಲಸ ಇರುವುದಿಲ್ಲ. ಭೋಗವಿಲಾಸಗಳನ್ನು ಬಯಸುವ ಮೈಗಳ್ಳ ಜನ ಇಂಥ ವೃತ್ತಿಗಳನ್ನು ಹುಡುಕುತ್ತಾರೆ. ಇದು ಸತ್ಯ, ಉಳಿದೆಲ್ಲಾ ವಾದವೂ ಬರೀ ನೆಪ.
ವಕೀಲಿ ಕಸುಬು ಗೌರವಯುತವಾದುದೆಂದು ಕಂಡುಹಿಡಿದವರು ವಕೀಲರೇ. ಆತ್ಮಪ್ರಶಂಸೆ ಮಾದಿಕೊಳ್ಳುವ ಹಾಗೆಯೇ ಕಾನೂನನ್ನೂ ರಚಿಸುತ್ತಾರೆ. ಎಷ್ಟು ಸಂಭಾವನೆ ತೆಗೆದುಕೊಳ್ಳಬೇಕೆಂಬುದನ್ನು ತಾವೇ ನಿರ್ಧರಿಸುತ್ತಾರೆ. ಬಹಳ ಠೀವಿಯಿಂದ ಇರುತ್ತಾರೆ. ಅದನ್ನು ಕಂಡು ಬಡಬಗ್ಗರು ಇವರನ್ನು ದೇವರೆಂದೇ ತಿಳಿಯುತ್ತಾರೆ.
ಸಾಮಾನ್ಯ ಕೂಲಿಗಾರನಿಗಿಂತ ಇವರಿಗೇಕೆ ಹೆಚ್ಚು ಸಂಭಾವನೆ ಬೇಕು? ಕೂಲಿಗಾರರಿಗಿಂತ ಹೆಚ್ಚು ಅವಶ್ಯಕತೆಗಳು ಇವರಿಗೇಕೆ? ಕೂಲಿಗಾರರಿಗಿಂತ ಹೆಚ್ಚಾಗಿ ಇವರು ಮಾಡಿದ ದೇಶಸೇವೆಯೇನು? ಸೇವೆ ಮಾಡಿದವರಿಗೆ ಹೆಚ್ಚು ಹಣ ಪಡೆವ ಅಧಿಕಾರವೇ? ಹಣಕ್ಕಾಗಿ ಕೆಲಸ ಮಾಡಿದರೆ ಅದನ್ನು ಸೇವೆಯೆನ್ನಬಹುದೇ?
ಹಿಂದೂ-ಮುಸ್ಲಿಂ ಜಗಳಗಳೆಲ್ಲಾ ಎಷ್ಟೋ ಸಲ ವಕೀಲರ ಕೈವಾಡದಿಂದಲೇ ಆಗಿವೆಯೆಂಬುದನ್ನು ಈ ಜಗಳಗಳ ಪರಿಚಯವಿದ್ದವರು ಬಲ್ಲರು. ಇದರಿಂದ ಕೆಲವು ಮನೆತನಗಳೇ ಹಾಳಾಗಿವೆ. ಅಣ್ಣತಮ್ಮಂದಿರು ಬದ್ಧ ವೈರಿಗಳಾಗಿದ್ದಾರೆ. ಎಷ್ಟೋ ಸಂಸ್ಥಾನಗಳು ಇವರ ಕೈಗೆ ಸಿಕ್ಕಿ ಸಾಲದಲ್ಲಿ ಮುಳುಗಿಹೋಗಿವೆ. ಅನೇಕರಿಗೆ ಸರ್ವನಾಶವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಅವರಿಂದ ದೇಶಕ್ಕಾದ ನಷ್ಟ ಇಂಗ್ಲಿಷರ ಮುಷ್ಠಿಯನ್ನು ಬಲಪಡಿಸಿದುದು. ಕೋರ್ಟುಗಳಿಲ್ಲದಿದ್ದರೆ ಇಂಗ್ಲಿಷರು ತಮ್ಮ ಆಡಳಿತ ನಡೆಯಿಸಲಾಗುತ್ತಿರಲಿಲ್ಲ. ಕೋರ್ಟುಗಳು ಜನರ ಹಿತಕ್ಕಾಗಿ ಆಗಿವೆ ಎಂದು ತಿಳಿಯುವುದು ತಪ್ಪು. ತಮ್ಮ ಸತ್ತೆಯನ್ನು ಸ್ಥಿರಗೊಳಿಸಬೇಕೆನ್ನುವವರು ಕೋರ್ಟುಗಳ ಮೂಲಕ ಹಾಗೆ ಮಾಡುತ್ತಾರೆ.
ಜನರು ತಮ್ಮ ಜಗಳಗಳನ್ನು ತಾವೇ ಪರಿಹರಿಸಿಕೊಂಡರೆ ಅವರ ಮೇಲೆ ಮೂರನೆಯವರದೇನು ಅಧಿಕಾರ? ಕಾದಾಡಿಯೋ, ತಮ್ಮ ಆಪ್ತೇಷ್ಟರಿಂದ ತೀರ್ಪು ಮಾಡೊಕೊಂಡೋ, ಜನರು ತಮ್ಮ ತಮ್ಮೊಳಗೆಯೇ ಜಗಳಗಳನ್ನು ಪರಿಹರಿಸುತ್ತಿದ್ದಾಗ ಇಷ್ಟು ನಪುಂಸಕರಾಗಿರಲಿಲ್ಲ. ಈ ಕೋರ್ಟು-ಕಚೇರಿಗಳಿಗೆ ಹೋಗಲು ಮೊದಲಿಟ್ಟ ಮೇಲೆ ಜನರು ಹೆಚ್ಚು ಅಂಜುಗೂಳಿಗಳೂ, ನಪುಂಸಕರೂ ಆದರು.
ಹೊಡೆದಾಡಿ ಸಾಯುವುದು ಅಸಭ್ಯತೆಯೆ, ಸಂದೇಹವಿಲ್ಲ. ಆದರೆ, ನಮ್ಮ ಜಗಳಗಳನ್ನು ನೀವು ತೀರಿಸಿಕೊಡಿ ಎಂದು ಮೂರನೆಯವರನ್ನು ಕೇಳುವುದು ಮಾತ್ರ ಅಸಭ್ಯತೆಯಲ್ಲವೇ? ಮೂರನೆಯವರು ಮಾಡಿದ ತೀರ್ಮಾನ ಯಾವಾಗಲೂ ಸರಿಯೆಂದು ಹೇಳಬಲ್ಲವರು ಯಾರು? ಯಾರದು ಸತ್ಯವೋ ಆ ಕಕ್ಷಿಗಳಿಗೆ ಮಾತ್ರವೇ ಗೊತ್ತು.
ನಾವು ಭೋಳೇ ಜನ, ಅಜ್ಞಾನಿಗಳು. ನಮ್ಮ ಹಣ ತೆಗೆದುಕೊಂಡ ಹೊಸಬ ನಮಗೆ ನ್ಯಾಯದಾನ ಮಾಡಬಲ್ಲ ಎಂದು ತಿಳಿಯುತ್ತೇವೆ.
ಮುಖ್ಯವಾಗಿ ನೆನಪಿಡಬೇಕಾದುದು ಇಷ್ಟು; ವಕೀಲರಿಲ್ಲದಿದ್ದರೆ ಈ ಕೋರ್ಟುಗಳೇ ಸ್ಥಾಪಿತವಾಗುತ್ತಿರಲಿಲ್ಲ. ಕೋರ್ಟುಗಳಿಲ್ಲದೆ ಇಂಗ್ಲಿಷರು ರಾಜ್ಯ ನಡೆಸಲಾಗುತ್ತಿರಲಿಲ್ಲ. ಬರೀ ಇಂಗ್ಲಿಷ್ ನ್ಯಾಯಾಧೀಶರು, ಇಂಗ್ಲಿಷ್ ವಕೀಲರು, ಇಂಗ್ಲಿಷ್ ಪೊಲೀಸರೇ ಇದ್ದಿದ್ದರೆ, ಇಂಗ್ಲೀಷರನ್ನು ಮಾತ್ರ ಅವರು ಆಳಬಹುದಾಗಿತ್ತು. ಭಾರತೀಯ ನ್ಯಾಯಾಧೀಶರು, ಭಾರತೀಯ ವಕೀಲರು ಇಲ್ಲದೆ ಇಂಗ್ಲಿಷರ ಕೆಲಸ ನಡೆಯುತ್ತಿರಲಿಲ್ಲ.
ಮೊಟ್ಟಮೊದಲು ವಕೀಲರು ಹೇಗೆ ಹುಟ್ಟಿಕೊಂಡರೋ, ಅವರ ಮೇಲೆ ಹೇಗೆ ಕೃಪಾಕಟಾಕ್ಷ ಬಿತ್ತೋ, ನೀವು ತಿಳಿದುಕೊಳ್ಳಬೇಕು. ಆಗ ಈ ಕಸುಬಿನ ಬಗ್ಗೆ ನನಗಿರುವಷ್ಟೇ ತಿರಸ್ಕಾರ ನಿಮಗೂ ಹುಟ್ಟುತ್ತದೆ.
ಈ ವಕೀಲರು ತಮ್ಮ ಕಸುಬನ್ನು ಬಿಡಲಿ, ಈ ಕಸುಬು ಹೀನ ಎನ್ನಲಿ; ಇಗ್ಲಿಷರ ರಾಜ್ಯ ಒಂದು ದಿನದಲ್ಲಿ ಕರಗಿ ಹೋಗುತ್ತದೆ.
ನ್ಯಾಯಾಧೀಶರ ಕುರಿತು ಮಹಾತ್ಮಾ ಗಾಂಧೀಜಿ!
ವಕೀಲರನ್ನು ಕುರಿತು ಹೇಳಿದುದೆಲ್ಲಾ ನ್ಯಾಯಾಧೀಶರಿಗೂ ಅನ್ವಯಿಸುತ್ತದೆ. ಅವರೂ ಇವರೂ ದಾಯಾದಿಗಳು. ಅವರಿಂದ ಇವರಿಗೆ ಬಲ. ಇವರಿಂದ ಅವರಿಗೆ ಬಲ.
ಅಧಾರ: ಹಿಂದ್ ಸ್ವರಾಜ್ಯ (ಲೇಖಕರು – ಮೋಹನ್ ದಾಸ್ ಕರಮ್ ಚಂದ್ ಗಾಂಧಿ. ೧೯೦೮, ಮೊದಲ ಮುದ್ರಣ. ಪ್ರಕಾಶಕರು – ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು – ೫೬೦ ೦೦೧)
Law slogan in Kannada
ಕಾನೂನಿಲ್ಲದೇ ಜೀವನವಿಲ್ಲ.ಕಾನೂನನ್ನು ತಿಳಿಯಿರಿ ಜೀವನವನ್ನು ಅರಿಯಿರಿ.
Plead in court just like talk the parents.
ನ್ಯಾಯಾಲಯದಲ್ಲಿ ವಾದಿಸುವುದು ತಾಯಿ, ತಂದೆಯರ ಜೊತೆ ಮಾತನಾಡಿದ ಹಾಗೆ.
Justice is nothing but law. Don’t require a degree in law.
ನ್ಯಾಯ ತೀರ್ಪು ಕಾನೂನಿನಿಂದ ಹೊರತಾಗಿಲ್ಲ. ಯಾವುದೇ ಕಾನೂನು ಪದವಿಯ ಅಗತ್ಯವಿಲ್ಲ.
Lawyers are liers and mere middle men. ವಕೀಲರು ಸುಳ್ಳುಗಾರರು
ಮತ್ತು ಕೇವಲ ಮಧ್ಯವರ್ತಿಗಳಾಗಿರುವರು.
0 Add your Comments/Feedback:
Post a Comment